Bigg Boss Kannada Season 5 : ಸೆಲೆಬ್ರಿಟಿ ಸ್ಪರ್ಧಿಗಳ ಪ್ರಕಾರ ಅವರೇ ಸರಿ | Filmibeat Kannada

2017-11-16 998

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ.! ಅವರು ಮಾಡಿದ್ರೆ ಮೋಸ, ಇವರು ಮಾಡಿದ್ರೆ? ಅದು ಕೋಪವೋ ಇಲ್ಲ ತಪ್ಪು ತಿಳುವಳಿಕೆಯೋ ಅಥವಾ ಗೇಮ್ ಪ್ಲಾನೋ... ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳ ಮಧ್ಯೆ ಕಂದಕ ಮೂಡಿರುವುದಂತೂ ಸತ್ಯ. ಅವರಿಗೆ ಇವರನ್ನ ಕಂಡ್ರೆ ಆಗಲ್ಲ. ಇವರಿಗೆ ಅವರನ್ನ ಕಂಡ್ರೆ ಆಗ್ಬರಲ್ಲ.! ಹೀಗಿರುವಾಗಲೇ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಐದನೇ ವಾರ ಓಪನ್ ನಾಮಿನೇಷನ್ ನಡೆಯಿತು. ಸ್ಪರ್ಧಿಗಳ ಭಾವಚಿತ್ರದಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದು ಬೆಂಕಿಗಾಹುತಿ ಮಾಡುವ ಮೂಲಕ ನಾಮಿನೇಟ್ ಮಾಡಬೇಕಿತ್ತು. ಇದರಲ್ಲಿ 'ಬಿಗ್ ಬಾಸ್' ಮನೆ ಅಕ್ಷರಶಃ ಇಬ್ಭಾಗ ಆಗಿರುವುದು ಸ್ಪರ್ಧಿಗಳಿಗೆ ಗೋಚರಿಸಿತು. ಜನಸಾಮಾನ್ಯ ಸ್ಪರ್ಧಿಗಳನ್ನ ಸೆಲೆಬ್ರಿಟಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದರೆ, ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಜನಸಾಮಾನ್ಯ ಸ್ಪರ್ಧಿಗಳು ವೋಟ್ ಮಾಡಿದರು.


Videos similaires